ಮಂಡ್ಯ: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳ ನಂತರ ಈಗ ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿವೆ.
ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಈಗ ಹೆದ್ದಾರಿಯಲ್ಲಿ ಸಂಚರಿಸುವವರ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಶನಿವಾರ ರಾತ್ರಿ ಎರಡು ಕಡೆ ದರೋಡೆ ನಡೆಸಿ ಚಿನ್ನಾಭರಣ ದೋಚಲಾಗಿದೆ. ಗೌರಿಪುರ ಬಳಿ ದರೋಡೆ ನಡೆಸಲಾಗಿದೆ. ರಾತ್ರಿ ವೇಳೆ ಪ್ರಯಾಣಿಸುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಲಾಗುತ್ತಿದೆ. ಉಡುಪಿಯ ಶಿವಪ್ರಸಾದ್, ಸುಮಾ ದಂಪತಿ ನಗುವನಹಳ್ಳಿ ಗೇಟ್ ಬಳಿ ಭಾರತ್ ಬೆಂಜ್ ಕಂಪನಿ ಎದುರು ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಂಪತಿಯನ್ನು ಬೆದರಿಸಿ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇದಾದ ಕೆಲ ಹೊತ್ತಿನಲ್ಲಿ ಗೌರಿಪುರ ಸಮೀಪ ಕೋಲಾರ ಜಿಲ್ಲೆ ಮಾಲೂರಿನ ಡಾ. ರಕ್ಷಿತ್ ರೆಡ್ಡಿ ಮತ್ತು ಡಾ. ಮಾನಸ ದಂಪತಿಯನ್ನು ಬೆದರಿಸಿ 40 ಗ್ರಾಂ ಚಿನ್ನಾಭರಣ ಲೂಟಿ ಮಾಡಲಾಗಿದೆ.