ಬೆಂಗಳೂರು: ಆಶ್ರಯ ಕೊಟ್ಟ ಸ್ನೇಹಿತನನ್ನೇ ಯುವಕನೊಬ್ಬ ಕೊಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಭೋವಿ ಪಾಳ್ಯದಲ್ಲಿ ನಡೆದಿದೆ.
ಪ್ರದೀಪ್(41) ಹತ್ಯೆಯಾದವರು. ಸಿಗರೇಟ್ ನಿಂದ ಸುಟ್ಟು ದೊಣ್ಣೆಯಿಂದ ಹೊಡೆದು ಪ್ರದೀಪನನ್ನು ಕೊಲೆ ಮಾಡಲಾಗಿದೆ. ಆರೋಪಿ ಚೇತನ್(26)ನನ್ನು ಮಾದನಾಯಕನಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕೊಲೆಗೈದು ಕಾರ್ ನಲ್ಲಿ ಸೇಲಂಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮನೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಆರೋಪಿಸಿ ಪ್ರದೀಪನನ್ನು ಕೊಲೆ ಮಾಡಲಾಗಿದೆ. ಶಬ್ದ ಬಾರದಂತೆ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಚೇತನ್ ಕೃತ್ಯವೆಸಗಿದ್ದಾನೆ. ಮೂರು ತಿಂಗಳಿನಿಂದ ಪ್ರದೀಪನ ಜೊತೆಗೆ ಆರೋಪಿ ಚೇತನ್ ವಾಸವಾಗಿದ್ದ. ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಸ್ಫೋಟಕ ಮಾಹಿತಿ ನೀಡಿದ್ದಾನೆ. ಪ್ರದೀಪನನ್ನು ಸಲಿಂಗ ಕಾಮಕ್ಕೂ ಬಳಸಿಕೊಳ್ಳುತ್ತಿದ್ದಾಗಿ, ವಿರೋಧ ವ್ಯಕ್ತಪಡಿಸುತ್ತಿದ್ದಾಗ ಸಿಗರೇಟ್ ನಿಂದ ಸುಡುತ್ತಿದ್ದುದಾಗಿ ತಿಳಿಸಿದ್ದಾನೆ. ಕೆಳಗಿನ ಮನೆಯವರು ಬಂದು ನೋಡಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿಂದೆಯೂ ರಾಬರಿ, ಹತ್ಯೆ ಪ್ರಕರಣದಲ್ಲಿ ಈತ ಜೈಲು ಪಾಲಾಗಿದ್ದ. ಜೈಲಿನಿಂದ ಬಿಡುಗಡೆಯಾಗಿ ಕಾರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.