ಬೆಂಗಳೂರು : ಮೆಟ್ರೋ ಕಾಮಗಾರಿ ನಡೆಯುವ ಹಿನ್ನೆಲೆ ಇಂದಿನಿಂದ 4 ತಿಂಗಳು ಸಿಲ್ಕ್ ಬೋರ್ಡ್ ಫ್ಲೈ ಓವರ್ ಬಂದ್ ಆಗಲಿದ್ದು, ವಾಹನ ಸವಾರರು ಸಹಕರಿಸುವಂತೆ ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ.
ಸೆಂಟ್ರಲ್ ಸಿಲ್, ಬೋರ್ಡ್ ಜಂಕ್ಷನ್ ಮೇಲೆತುವೆ ಅಪ್ ಮತ್ತು ಡೌನ್ ರಾಂಪ್ ಕ್ಯಾರೇಜ್ ವೇ (ಮಡಿವಾಳ ಬದಿ) ಲೂಪ್ಗಳು ಮತ್ತು ರಾಂಪ್ ಫ್ಲೈ ಓವರ್ ಸ್ಟೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21.10.2023 ರಿಂದ (4 ತಿಂಗಳುಗಳವರೆಗೆ ಎರಡೂ ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್) ಭಾಗಶ: ಬ್ಯಾರಿಕೇಡ್ ಮಾಡಲಾಗುವುದು, ಸಾರ್ವಜನಿಕರ ಸಹಕಾರ ಕೋರಲಾಗಿದೆ. ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಪ್ರಕಟಣೆ ಹೊರಡಿಸಿದೆ.
