ಬೆಂಗಳೂರು : ಸೆಪ್ಟೆಂಬರ್ 19 ರ ನಾಳೆ ಹಾಗೂ ಸೆಪ್ಟೆಂಬರ್ 20 ರಂದು ಬೆಂಗಳೂರಿನ ವಿವಿಧ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿ ತಿಳಿಸಿದೆ.
ನಿರ್ವಹಣಾ ಕಾಮಗಾರಿ ಕಾರಣದಿಂದ ನಾಳೆ, ನಾಡಿದ್ದು ಬೆಂಗಳೂರಿನ ವಿವಿಧ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಎಸ್ ಆರ್ ಬೆಂಗಳೂರು-ದೇವನಹಳ್ಳಿ-ಕೆಎಸ್ ಆರ್ ಬೆಂಗಳೂರು, ದೇವನಹಳ್ಳಿ-ಯಲಹಂಕ, ಯಲಹಂಕ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ, ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ, ದೇವನಹಳ್ಳಿ-ಯಲಹಂಕ-ದೇವನಹಳ್ಳಿ ಮೆಮು ರೈಲು ಸಂಚಾರ ರದ್ದಾಗಲಿವೆ.