ಮನಸ್ಸೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಬೆಂಗಳೂರಿನಲ್ಲೊಬ್ಬ ಟೆಕ್ಕಿ ತನ್ನ ವೃತ್ತಿಯ ಜೊತೆಗೆ ಕುರಿಗಳನ್ನು ಸಾಕುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದು, ಇಡೀ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಟೆಕ್ಕಿ ಯೋಗೇಶ್ ಗೌಡ ಎಂಬ 30 ವರ್ಷದ ತರುಣ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ದಿನಂಪ್ರತಿ ಬೆಳಗ್ಗೆ 5.30 ರಿಂದ ಇವರ ಕುರಿ ಪಾಲನೆಯ ಪ್ರವೃತ್ತಿ ಆರಂಭವಾಗಲಿದೆ. ದಿನದಲ್ಲಿ ಇಂತಿಷ್ಟು ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಇವರು ತಮ್ಮ ಮನೆಗೆ `ಹಸು ಮನೆ’ ಎಂದು ನಾಮಕರಣ ಮಾಡಿರುವುದು ಮತ್ತೊಂದು ವಿಶೇಷವೆನಿಸಿದೆ.
BIG NEWS: ಸುಳ್ಳು ಸುದ್ದಿ ಹರಡುತ್ತಿದ್ದ 16 ಯುಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧ
ಏಳು ವರ್ಷಗಳ ಹಿಂದೆ ಹಸುಗಳನ್ನು ಸಾಕಲು ಆರಂಭಿಸಿದ್ದ ಅವರು ಪ್ರತಿದಿನ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ಕ್ಕೆ 100 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದರು. ನಾಲ್ಕು ವರ್ಷಗಳ ನಂತರ ಕುರಿಯನ್ನೂ ಸಾಕಲು ಆರಂಭಿಸಿದ್ದು, ಇದರೊಂದಿಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ತಾಯಿಗೆ ಸೋಂಕು ಬಂದಿದ್ದರಿಂದ ಹಸುಗಳನ್ನು ಮಾರಾಟ ಮಾಡಿದ್ದ ಗೌಡ, ಕೇವಲ ಕುರಿಗಳನ್ನು ಸಾಕುವುದನ್ನು ಮುಂದುವರಿಸಿದ್ದಾರೆ.
ಕುರಿಗಳನ್ನು ಸಾಕಿ ದಷ್ಟಪುಷ್ಟವಾದ ನಂತರ ಅವುಗಳನ್ನು ನೇರವಾಗಿ ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಕೈತುಂಬಾ ಆದಾಯವನ್ನು ಗಳಿಸುತ್ತಿದ್ದಾರೆ. ಮೂರು ಸ್ಥಳೀಯ ತಳಿಗಳಾದ ಮೌಲಿ, ಕೆಂಗೂರಿ ಮತ್ತು ನಾಟಿಮರಿಗಳನ್ನು ಅವರು ಸಾಕುತ್ತಿದ್ದಾರೆ.