ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬ ವ್ಯಕ್ತಿಗೂ ವಿಮಾನ ನಿಲ್ದಾಣದ ಸಂಗ್ರಹಣೆ ಕೌಂಟರ್‌ನಿಂದ ತಮ್ಮ ಲಗೇಜ್ ಸಂಗ್ರಹಿಸುವ ಹೋರಾಟ ತಿಳಿದಿರುತ್ತದೆ. ನಿಮ್ಮ ಎಲ್ಲಾ ಬ್ಯಾಗ್‌ಗಳನ್ನು ನೀವು ತೆಗೆದುಕೊಳ್ಳುವವರೆಗೂ ಅಯ್ಯಬ್ಬಾ ಅನಿಸಿಬಿಡುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ಎಷ್ಟು ಕಾದರೂ ತನ್ನ ಬ್ಯಾಗ್ ಸಿಗಲಿಲ್ಲ. ಅದಕ್ಕೆ ಈತ ಮಾಡಿದ್ದೇನು ಅಂತಾ ಕೇಳಿದ್ರೆ ಅಚ್ಚರಿ ಪಡ್ತೀರಾ..!
ಇಂಡಿಗೋ ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ನಂದನ್ ಕುಮಾರ್ ಗೆ ಆಗಿರೋ ಅನುಭವ ಇದಾಗಿದೆ. ಬಹುಶಃ ಇವರದ್ದೇ ರೀತಿಯ ಬ್ಯಾಗನ್ನು ಹೊಂದಿದ್ದ ಸಹ-ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಕುಮಾರ್ ಅವರ ಬ್ಯಾಗ್ ಅನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಕುಮಾರ್ ತನ್ನ ಬ್ಯಾಗ್ ಅನ್ನು ಹಿಂಪಡೆಯಲು ತನ್ನ ಡೆವಲಪರ್ ಕೌಶಲ್ಯಗಳನ್ನು ಬಳಸಬೇಕಾಯಿತು.
ಈ ಕುರಿತು ಕುಮಾರ್ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಇಂಡಿಗೋ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಒಂದೇ ರೀತಿಯ ಬ್ಯಾಗ್ ಆಗಿದ್ದರಿಂದ ಸಹ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್ ಪಡೆದುಕೊಂಡಿದ್ದಾರೆ ಎಂದು ಕುಮಾರ್ ವಿವರಿಸಿದ್ದಾರೆ.
ಅವರು ಗ್ರಾಹಕ ಸೇವೆ ಎಂದು ಕರೆಯಲ್ಪಡುವ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಯ ಬಗ್ಗೆ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಾಗಲಿಲ್ಲ. ಕಸ್ಟಮರ್ ಕೇರ್ ತಂಡವು ಗೌಪ್ಯತೆ ಮತ್ತು ಡೇಟಾ ರಕ್ಷಣೆಯನ್ನು ಉಲ್ಲೇಖಿಸಿ, ವ್ಯಕ್ತಿಯ ಸಂಪರ್ಕ ವಿವರಗಳನ್ನು ಒದಗಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾಗಿ ಕುಮಾರ್ ಉಲ್ಲೇಖಿಸಿದ್ದಾರೆ.
ಹಲವಾರು ವಿಫಲ ಪ್ರಯತ್ನಗಳ ನಂತರ ಕುಮಾರ್ ಸ್ವತಃ ತಾನೇ ಹುಡುಕಲು ಮುಂದಾದ ಅವರು, ಇಂಡಿಗೋ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ. ತನ್ನ ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಎಫ್ 12 ಬಟನ್ ಅನ್ನು ಒತ್ತಿ, ನಂತರ ಇಂಡಿಗೋ ವೆಬ್‌ಸೈಟ್‌ನಲ್ಲಿ ಡೆವಲಪರ್ ಕನ್ಸೋಲ್ ಅನ್ನು ತೆರೆದಿದ್ದಾರೆ. ನೆಟ್‌ವರ್ಕ್ ಲಾಗ್ ದಾಖಲೆಯೊಂದಿಗೆ ಚೆಕ್-ಇನ್ ಮಾಡಿದ್ದಾಗಿ ಕುಮಾರ್ ಬರೆದಿದ್ದಾರೆ.
ಈ ಪ್ರಕ್ರಿಯೆಯ ನಂತರ ಅವರು ತನ್ನ ಬ್ಯಾಗ್ ಅನ್ನು ಪಡೆದುಕೊಂಡ ಪ್ರಯಾಣಿಕನ ಪಿಎನ್ಆರ್ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ಗ್ರಾಹಕರ ವಿವರಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ಈ ವೇಳೆ ಇಂಡಿಗೋ ಏರ್‌ಲೈನ್ಸ್ ಹೊಂದಿರುವ ಕೆಲವು ಲೋಪದೋಷಗಳನ್ನು ಕುಮಾರ್ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಡಿಗೋ, ಉಂಟಾದ ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದೆ. ಹಾಗೂ ವೆಬ್‌ಸೈಟ್‌ಗೆ ಯಾವುದೇ ಭದ್ರತಾ ಲೋಪಗಳಿಲ್ಲ ಎಂದು ಭರವಸೆ ನೀಡಿದೆ. ಇದು ಅತ್ಯಂತ ನೈತಿಕ ಮಾರ್ಗವಲ್ಲದಿದ್ದರೂ, ಕನಿಷ್ಠ ಕುಮಾರ್ ಅವರು ತನ್ನ ಬ್ಯಾಗ್ ಅನ್ನು ಮರಳಿ ಪಡೆದಿದ್ದಾರೆ.