ಬೆಂಗಳೂರು: ಸಂಚಾರ ದಟ್ಟಣೆ, ಕೆಟ್ಟು ಹೋಗಿರುವ ರಸ್ತೆಗಳ ಕಾರಣ ಬೇಸತ್ತ ಬೆಂಗಳೂರಿಗರು ತಮ್ಮ ಕಾರುಗಳ ಮೂರು, ನಾಲ್ಕು ಮತ್ತು ಐದನೇ ಗೇರ್‌ಗಳನ್ನೇ ಮಾರಾಟ ಮಾಡಲು ಮುಂದಾಗಿದ್ದಾರಂತೆ.!
ಹೌದು, ಬೆಂಗಳೂರಿನ ಶ್ರೀಕಾಂತ್ ಎಂಬುವವರು ಇಂಥದ್ದೊಂದು ಅದ್ಭುತ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ಬೆಂಗಳೂರಿನ ಸಂಚಾರ ದಟ್ಟಣೆ ಕುರಿತಾಗಿ ಜನರಿಗೆ ಇರುವ ಸಾತ್ವಿಕ ಆಕ್ರೋಶವನ್ನು ಹೊರಹಾಕಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸತ್ತೋ ಬಿಡುತ್ತೋ ಗೊತ್ತಿಲ್ಲ. ಟ್ವೀಟರ್‌ನಲ್ಲಂತೂ ಇದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ನಗರದ ಟ್ರಾಫಿಕ್ ಜಾಮ್ ಕುರಿತು ವ್ಯಂಗ್ಯವಾಡಿರುವ ಟ್ವೀಟ್ ಪೋಸ್ಟ್‌ನಲ್ಲಿ ಶ್ರೀಕಾಂತ್, ನನ್ನ ಸ್ನೇಹಿತ ತನ್ನ ಕಾರಿನ ಮೂರು, ನಾಲ್ಕು ಮತ್ತು ಐದನೇ ಗೇರ್‌ಗಳನ್ನು ಮಾರಾಟ ಮಾಡಲು ಯೋಜಿಸುತ್ತಿದ್ದಾನೆ. ಅವೆಲ್ಲ ಇಲ್ಲಿ ಬಳಕೆಗೆ ಬಂದಿಲ್ಲ ಮತ್ತು ಷೋರೂಂನಿಂದ ತಂದ ಸ್ಥಿತಿಯಲ್ಲೇ ಇವೆ ಎಂದು ಹೇಳಿಕೊಂಡಿದ್ದಾರೆ.
“ಬೆಂಗಳೂರಿನಲ್ಲಿ ಯಾರಾದರೂ ಖರೀದಿದಾರರು ಇದ್ದಾರೆಯೇ? ಎಂದು ಅವರು ಟ್ವೀಟ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಶ್ರೀಕಾಂತ್ ಅವರ ಟ್ವೀಟ್ ಪೋಸ್ಟ್ ಕ್ಷಿಪ್ರವಾದ ಪ್ರತಿಕ್ರಿಯೆಗಳನ್ನು ಮತ್ತು ಲೈಕ್ಸ್‌ಗಳನ್ನು ಗಳಿಸಿತು. ಅಷ್ಟೇ ಅಲ್ಲ, ಇನ್ನಷ್ಟು ಪ್ರತಿಕ್ರಿಯೆಗಳು, ಮೀಮ್‌ಗಳು ವ್ಯಕ್ತವಾಗಿವೆ. “ಇದು ಎಲ್ಲಾ ಮಹಾನಗರಗಳ ಸ್ಥಿತಿ!” ಎಂಬುದು ಒಬ್ಬರ ಪ್ರತಿಕ್ರಿಯೆ. “ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಅಪ್‌ಡೇಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ಆದರೆ ಉತ್ತಮ ಸೃಜನಶೀಲತೆಯನ್ನು ಹೇಳಬೇಕು” ಎಂಬುದು ಮತ್ತೊಬ್ಬರ ಕಮೆಂಟ್.
ಇಂತಹ ಹಲವು ಕಾಮೆಂಟ್‌ಗಳಿಗೆ ಇಲ್ಲಿ ನೋಡಿ: