
KA 05 JX 1344 ಸಂಖ್ಯೆಯ ದ್ವಿಚಕ್ರ ವಾಹನವನ್ನು ಫೆಬ್ರವರಿ 3ರಂದು ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ವಾಹನ ಸವಾರನಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಮಾಹಿತಿ ನೀಡಲಾಗಿತ್ತು.
ಪೊಲೀಸರು ಸಮನ್ಸ್ ನೀಡಿದ ನಂತರ, ದ್ವಿಚಕ್ರ ವಾಹನ ಸವಾರ 1.61 ಲಕ್ಷ ರೂಪಾಯಿ ದಂಡವನ್ನು ಪಾವತಿಸಿ ತನ್ನ ಬೈಕ್ ಅನ್ನು ಬಿಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದಂಡ ಪಾವತಿಸಿ ಬೈಕ್ ತೆಗೆದುಕೊಂಡು ಹೋಗುವ ಮಾಲೀಕರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.
ಫೆಬ್ರವರಿ 2023 ರಿಂದ ಸಂಚಾರ ನಿಯಮ ಉಲ್ಲಂಘಿಸಿ 311 ಪ್ರಕರಣಗಳು ದಾಖಲಾಗಿ ಬಾಕಿ ಮೊತ್ತ 1,61,000/- ರೂ ಇದ್ದ ದ್ವಿಚಕ್ರ ವಾಹನ ನಂಬರ್ KA05JX1344 ವಾಹನವನ್ನು ಪತ್ತೆ ಮಾಡಿ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. @blrcitytraffic @DCPTrWestBCP @acpwesttrf @Jointcptraffic pic.twitter.com/22pdPVBP6E
— ಸಿಟಿಮಾರ್ಕೆಟ್ ಸಂಚಾರ ಪೊ. ಠಾ. CITY MARKET TRAFFIC BTP (@citymarkettrps) February 3, 2025
ಒಟ್ಟು 311 ಬಾಕಿ ಪ್ರಕರಣಗಳಿದ್ದ ಮೇರೆಗೆ ದಿನಾಂಕ:03.02.2025 ರಂದು ಠಾಣೆಯಲ್ಲಿ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನ ನಂಬರ್ ಕೆಎ-05 ಜೆಎಕ್ಸ್-1344 ಸ್ಕೂಟರ್ ನ ಮಾಲೀಕ/ಚಾಲಕನಿಂದ ಒಟ್ಟು ರೂ 1,61,500/- ದಂಡದ ಮೊತ್ತವನ್ನು ಕಟ್ಟಿಸಿದ್ದು, ಸದರಿ ವಾಹನದ ಚಾಲಕ/ಮಾಲೀಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಕ್ತ ತಿಳುವಳಿಕೆ ನೀಡಿರುತ್ತದೆ. pic.twitter.com/snYlFYMMqg
— ಸಿಟಿಮಾರ್ಕೆಟ್ ಸಂಚಾರ ಪೊ. ಠಾ. CITY MARKET TRAFFIC BTP (@citymarkettrps) February 4, 2025
SUCCESS 🙌 @blrcitytraffic have apprehended the culprit with ₹1,61,000.00 pending traffic amount! https://t.co/0YEpAxQrPr pic.twitter.com/KtKMXbPExL
— ThirdEye (@3rdEyeDude) February 3, 2025