alex Certify ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ

ನವದೆಹಲಿ: 2005ರಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿಯನ್ನು ಅತ್ಯಾಚಾರದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ 2021 ರ ಡಿಸೆಂಬರ್ ನಲ್ಲಿ ಮಹಿಳೆಯ ಮೇಲೆ ಆಕೆಯ ದೆಹಲಿಯ ಕಾನ್ಪುರ ನಿವಾಸದಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬೆಂಗಳೂರಿನ ಹೊರಹೊಲಯದಲ್ಲಿ ಬಂಧಿಸಿದ್ದಾರೆ.

ಘಟನೆಯ ಬಗ್ಗೆ ವಿವರಿಸಿದ ಸಂತ್ರಸ್ತೆಯು, ನನ್ನ ಮೈದುನ 2021 ರ ಡಿಸೆಂಬರ್ 13 ರಂದು ದೆಹಲಿಯ ತನ್ನ ಮನೆಯಲ್ಲಿ ಪತಿ ಮತ್ತು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿ ನನ್ನ ಮೇಲೆ ಅತ್ಯಾಚಾರವೆಸಗಿದ. ಅಲ್ಲದೇ ಈ ದೌರ್ಜನ್ಯದ ವಿಡಿಯೋವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದರು. 2005 ರಲ್ಲಿ, ಕಾನ್ಪುರದಲ್ಲಿ ಮಹಿಳೆಯ ಮೇಲೆ ಆಸಿಡ್ ಎರಚಿದ ಕಾರಣ ನ್ಯಾಯಾಲಯವು ಏಳು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿತ್ತು. ಆದರೆ ಶಿಕ್ಷೆಯ ಅವಧಿ ಮುಗಿದ ಬಳಿಕ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದು, ಈತನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದರು.

BIG NEWS: ಸಚಿವ ಅಶ್ವತ್ಥನಾರಾಯಣ-ಎಂ.ಬಿ. ಪಾಟೀಲ್ ಭೇಟಿ ವಿಚಾರ; ರಕ್ಷಣೆಗಾಗಿ ಭೇಟಿಯಾಗಿದ್ದಾರೆ ಎಂದ ಡಿ.ಕೆ.ಶಿ ; ಅವಶ್ಯಕತೆ ನನಗಿಲ್ಲ ಎಂದ ಸಚಿವ

ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆತ ಪರಾರಿಯಾಗಿದ್ದ, ಆರೋಪಿಯ ಬೆದರಿಕೆಗೆ ಹೆದರಿ ಮೂರು ತಿಂಗಳ ಕಾಲ ಮೌನ ವಹಿಸಿದ್ದ ಮಹಿಳೆಯು ಮಾರ್ಚ್ ತಿಂಗಳಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಇವರ ದೂರಿನ ಆಧಾರದ ಮೇಲೆ ಮಾರ್ಚ್ 21 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು 506 ರ ಅಡಿಯಲ್ಲಿ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಕಮಿಷನರ್ ಸಮೀರ್ ಶರ್ಮಾ ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.

ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ದೆಹಲಿಯ ಸುತ್ತಮುತ್ತ ತಂಡ ಹುಡುಕಿದರೂ ಆತನ ಸುಳಿವು ಕೂಡ ದೊರಕಿರಲಿಲ್ಲ. ತದನಂತರ ಹುಡುಕಾಟ ಮುಂದುವರೆಸಿದ ಪೊಲೀಸರು ಎಲೆಕ್ಟ್ರಾನಿಕ್ ಕಣ್ಗಾವಲು ಸಹಾಯದಿಂದ, ಅಂತಿಮವಾಗಿ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿದರು. ಕಳೆದ ವಾರ ಮೂವರು ಸದಸ್ಯರ ತಂಡವನ್ನು ನಗರಕ್ಕೆ ಕಳುಹಿಸಿ, ಆರೋಪಿಯನ್ನು ದೆಹಲಿಗೆ ಕರೆತರಲಾಯಿತು. ಇದೀಗ ಆತನ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...