ಬೆಂಗಳೂರು: ತಾಯಿಯನ್ನು ಕೊಲೆ ಮಾಡಿ ಸೂಟ್ಕೇಸ್ ನಲ್ಲಿ ಶವವನ್ನು ಠಾಣೆಗೆ ತಂದ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬಿಳೇಕಹಳ್ಳಿಯ ಎಂಎಸ್ಆರ್ ಅಪಾರ್ಟ್ಮೆಂಟ್ ನಲ್ಲಿ ಕೃತ್ಯ ನಡೆದಿದೆ. ಪುತ್ರಿ ಸೋನಾಲಿ ಸೇನ್(39) ಕೊಲೆ ಆರೋಪಿ. ತಾಯಿ ಬೀವಾಪಾಲ್(78) ಅವರನ್ನು ಸೋನಾಲಿ ಕೊಲೆ ಮಾಡಿದ್ದಾಳೆ.
ತಾಯಿ, ಅತ್ತೆಯೊಂದಿಗೆ ಫ್ಲ್ಯಾಟ್ ನಲ್ಲಿ ಒಟ್ಟಿಗೆ ವಾಸವಾಗಿದ್ದ ಸೋನಾಲಿ ಇವರಿಬ್ಬರ ಜಗಳದಿಂದ ಬೇಸತ್ತಿದ್ದಳು. ಜಗಳದಿಂದಾಗಿ ನಿದ್ದೆ ಮಾತ್ರೆ ನುಂಗಿ ಸಾಯುವುದಾಗಿ ತಾಯಿ ಹೇಳಿದ್ದು, ಮುಂಜಾನೆ ತಾಯಿಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿದ್ದಾಳೆ. ಸೂಟ್ಕೇಸ್ ನಲ್ಲಿ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಠಾಣೆಗೆ ಬಂದಿದ್ದಾಳೆ. ಪೊಲೀಸರು ಆಕೆಯ ಕೃತ್ಯ ಕಂಡು ಬೆಚ್ಚಿಬಿಚ್ಚಿದ್ದಾರೆ. ಸೋನಾಲಿ ಸೇನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.