ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಕನ್ನಡದಲ್ಲಿಯೇ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.
ವಿಮಾನ ಲ್ಯಾಂಡಿಂಗ್, ಟೇಕಾಫ್, ವಿಮಾನ ನಿಲ್ದಾಣದಲ್ಲಿನ ಅನೌನ್ಸ್ ಮೆಂಟ್ ಸೇರಿದಂತೆ ಎಲ್ಲವೂ ಮೊದಲಿಗೆ ಕನ್ನಡಲ್ಲಿಯೇ ಪ್ರಕಟಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿಮಾನ ನಿಲ್ದಾಣಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಹೇಶ್ ಜೋಶಿ ಅವರು, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಲು ಮುಂದಾಗಿದ್ದಾರೆ. ಬಿಐಎ ಎಲ್ ನ ಎಂಡಿ ಹಾಗೂ ಸಿಇಒ ಹರಿ ಮರಾರ್ ಅವರನ್ನು ಭೇಟಿಯಾಗಿ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಅನೌನ್ಸ್ ಮೆಂಟ್ ಮಾಡುವಂತೆ ಹಾಗೂ ವಿಮಾನ ಲ್ಯಾಂಡಿಂಗ್, ಟೇಕಾಫ್ ಸಮಯದಲ್ಲಿ ಕನ್ನಡ ಬಳಸುವಂತೆ ಚರ್ಚೆ ನಡೆಸಿದ್ದಾರೆ.
ನವೆಂಬರ್ 1ರಿಂದ ವಿಮಾನದಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸಲು ಮನವಿ ಮಡಲಾಗಿದೆ. ಈ ಬಗ್ಗೆ ಮಾತನಾಡಿರುವ ಮಹೇಶ್ ಜೋಶಿ, ಮೊದಲು ಕನ್ನಡದಲ್ಲಿ ಪ್ರಕಟಣೆ ಹೊರಡಿಸಲಿ ಬಳಿಕ ಬೇರೆ ಭಾಷೆಗಳಲ್ಲಿ ಪ್ರಕಟಣೆ ಮಾಡಲಿ. ಬ್ರಿಟೀಷ್ ಏರ್ ವೇಸ್, ಸಿಂಗಾಪುರ ಏರ್ ಲೈನ್ಸ್ ಈಗಾಗಲೇ ಇದನ್ನು ಕಾರ್ಯಗತಗೊಳಿಸುತ್ತಿವೆ ಎಂದು ಹೇಳಿದರು.