ಬೆಂಗಳೂರು: ಬೆಂಗಳೂರಿನಲ್ಲಿ ಕರಗ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ವೀರಕುಮಾರರ ಅಲಗು ಸೇವೆ, ಭಕ್ತರ ಸಡಗರ ಮುಗಿಲು ಮುಟ್ಟಿದೆ.
ಕಬ್ಬನ್ ಪೇಟೆಯಿಂದ ಕರಗ ಮಹೋತ್ಸವ ಆರಂಭವಾಗಿದೆ. ಮಸ್ತಾನ್ ಸಾಬ್ ದರ್ಗಾದಲ್ಲಿ ದೂಪಧಾರತಿ ನೆರವೇರಿಸಿ ಮಾರ್ಕೆಟ್ ಸರ್ಕಲ್ ಮೂಲಕ ಸಾಗಿದೆ. ಗಲ್ಲಿ ಗಲ್ಲಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ದೀಪಾಲಂಕಾರ ಮಾಡಲಾಗಿದೆ. ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿದೆ.
ವಿಶ್ವವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವ ನಡೆಯುತ್ತಿದ್ದು, ಮಲ್ಲಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಕರಗ ಮೆರವಣಿಗೆಯಲ್ಲಿ ನೂರಾರು ವೀರಕುಮಾರರು ಭಾಗಿಯಾಗಿದ್ದಾರೆ. ಹಜರತ್ ತವಕಲ್ ಮಸ್ತಾನ್ ಶಾ ದರ್ಗಾ ತಲುಪಿದ ಕರಗ ಪ್ರದರ್ಶನ ಹಾಕಿದೆ. ನಂತರ ಬಿಬಿಎಂಪಿಯ ಏಳು ಸುತ್ತಿನ ಕೋಟೆ ದೇಗುಲ ತಲುಪಿದೆ. ನಂತರ ಅಣ್ಣಮ್ಮ ದೇವಾಲಯಕ್ಕೆ ಕರಗ ಮೆರವಣಿಗೆ ತಲುಪಲಿದ್ದು, ಪೂಜೆ ನೆರವೇರಿಸಿದ ನಂತರ ಸೂರ್ಯೋದಯದ ಬಳಿಕ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸ್ ಆಗಲಿದೆ.