ಬೆಂಗಳೂರು: ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆ ನಿವಾರಿಸಲು ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ.
ನೈರುತ್ಯ ರೈಲ್ವೆ ವತಿಯಿಂದ ಎಸ್ಎಂವಿಟಿ ಬೆಂಗಳೂರು –ಕಲಬುರಗಿ – ಎಸ್ಎಂವಿಟಿ -ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ನೀಡಲಾಗುವುದು.
ಎಸ್ಎಂಇಟಿ ಬೆಂಗಳೂರು -ಕಲಬುರಗಿ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ಸೆಪ್ಟಂಬರ್ 5, 6 ಮತ್ತು 7ರಂದು ರಾತ್ರಿ 9:15ಕ್ಕೆ ಹೊರಟು ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.
ಕಲಬುರಗಿ -ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಕಲಬುರಗಿಯಿಂದ ಸೆ. 7 ಮತ್ತು 8ರಂದು ಬೆಳಗ್ಗೆ 9:35ಕ್ಕೆ ಹೊರಟು ರಾತ್ರಿ 8ಗಂಟೆಗೆ ಎಸ್ಎಂವಿಟಿ ತಲುಪಲಿದೆ.
ಈ ವಿಶೇಷ ರೈಲುಗಳು ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು ಜಂಕ್ಷನ್, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. 2 ಎಸಿ 3 ಟೈರ್ ಕೋಚ್, 10 ಸ್ಲೀಪರ್ ಕ್ಲಾಸ್ ಕೋಚ್, 4 ಸೆಕೆಂಡ್ ಕ್ಲಾಸ್ ಕೋಚ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ಒಳಗೊಂಡಿದೆ.