ಬೆಂಗಳೂರು: ಬೆಂಗಳೂರು -ಹೈದರಾಬಾದ್ ನಡುವೆ ಸಂಚರಿಸುವ ಯಶವಂತಪುರ -ಕಾಚಿಗುಡ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾಯಿಸಲಾಗಿದೆ.
ಯಶವಂತಪುರ -ಕಾಚಿಗುಡ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 20704 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿಯನ್ನು ಮೆಹಬೂಬ್ ನಗರ ರೈಲು ನಿಲ್ದಾಣದಲ್ಲಿ ಜುಲೈ 18 ರಿಂದ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆ ಪರಿಷ್ಕರಿಸಿದೆ.
ಹೊಸ ವೇಳಾಪಟ್ಟಿಯ ಪ್ರಕಾರ ವಂದೇ ಭಾರತ್ ಎಕ್ಸ್ ಪ್ರೆಸ್ ಮೆಹಬೂಬ್ ನಗರಕ್ಕೆ ರಾತ್ರಿ 9:04/05 ನಿಮಿಷದ ಬದಲು 9:26/27ಕ್ಕೆ ಆಗಮಿಸಿ ನಿರ್ಗಮಿಸಲಿದೆ. ಈ ರೈನ ಬೇರೆ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.