ಬೆಂಗಳೂರು: ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರಯಾಣಿಸುವ ಎರಡು ರೈಲುಗಳನ್ನು ನೈಋತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ನವೆಂಬರ್ 20 ಹಾಗೂ 21ರಂದು ಪ್ರಯಾಣಿಸಬೇಕಿದ್ದ ರೈಲು ಸಂಖ್ಯೆ 07340 ಮತ್ತು 07339 ಕೆ ಎಸ್ ಆರ್ ಬೆಂಗಳೂರು ಎಸ್ ಎಸ್ ಎಸ್ ಹುಬ್ಬಳ್ಳಿ ಹಾಗೂ ಕೆ ಎಸ್ ಆರ್ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳನ್ನು ರದ್ದು ಮಾಡಲಾಗಿದೆ.
ಕಳಪೆ ಆಕ್ಯುಪೆನ್ಸಿ ಕಾರಣ ನೀಡಿ ಈ ರೈಲುಗಳು ತಾತ್ಕಾಲಿಕ ರದ್ದಾಗಿದೆ. ಮುಂದಿನ ಸುತ್ತೋಲೆ ಹೊರಡಿಸುವವರೆಗೂ ಈ ಎರಡು ರೈಲುಗಳು ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇನ್ನು ಹೊಸಪೇಟೆ-ಹರಿಹರ ಪ್ಯಾಸೇಂಜರ್ ರೈಲುಗಳನ್ನು ಕಾರಣಣಾಂತರಗಳಿಂದ ರದ್ದು ಮಡಲಾಗಿತ್ತು. ಇದೀಗ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.