ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟದ ಪ್ರಧಾನ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ನಡುವಿನ ರೈಲ್ವೆ ಪ್ರಯಾಣ ಶೀಘ್ರವೇ ಒಂದು ತಾಸು ಕಡಿಮೆಯಾಗಲಿದೆ.
ಸೌತ್ ವೆಸ್ಟ್ರನ್ ರೈಲ್ವೆಯು ಹುಬ್ಬಳ್ಳಿ – ಬೆಂಗಳೂರು ನಡುವಿನ ರೈಲ್ವೆ ಮಾರ್ಗವನ್ನು ಡಬಲಿಂಗ್ ಹಾಗೂ ವಿದ್ಯುದೀಕರಣಗೊಳಿಸುತ್ತಿದ್ದು, ಈ ಕೆಲಸ ಕೊನೆ ಹಂತ ತಲುಪಿದೆ. 2023ರ ಮಾರ್ಚ್ ಒಳಗಾಗಿ ಇದು ಪೂರ್ಣಗೊಳ್ಳುತ್ತದೆ. ಬಳಿಕ ರೈಲು ಸಂಚಾರ ವೇಗ ಹೆಚ್ಚಳಗೊಳ್ಳಲಿದೆ.
ಬೆಂಗಳೂರು ಹುಬ್ಬಳ್ಳಿ ನಡುವೆ 469 ಕಿಲೋ ಮೀಟರ್ ಇದ್ದು, ಪ್ರತಿನಿತ್ಯ ಒಂಬತ್ತು ರೈಲು, ಈ ಸೆಕ್ಷನ್‌ನಲ್ಲಿ ಒಟ್ಟಾರೆ 24 ರೈಲು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಪ್ರಸ್ತುತ ಇರುವ ರೈಲುಗಳಲ್ಲಿ ಜನಶತಾಬ್ದಿಯು ಅತಿ ವೇಗದ ಸಂಚರಿಸುವ ರೈಲಾಗಿದ್ದು, ಇದು ಏಳು ತಾಸು ತೆಗೆದುಕೊಳ್ಳಲಿದೆ.
ರೈಲ್ವೆ ಇಲಾಖೆ ಪ್ರಕಾರ ಈ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣವಾದ ಬಳಿಕ ರೈಲಿನ ಪ್ರಯಾಣ ಅವಧಿ ಮುಕ್ಕಾಲು ಗಂಟೆಯಿಂದ ಒಂದು ತಾಸು ಕಡಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.