ಬೆಂಗಳೂರು : ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರಿನ ಪೀಣ್ಯ ಫ್ಲೈಓವರ್ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೌದು, ಪೀಣ್ಯ ಫ್ಲೈಓವರ್ನಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್ಸಿ ತಜ್ಞರ ವರದಿ ಎನ್ಹೆಚ್ಎಐ ಕೈ ಸೇರಿದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್ಹೆಚ್ಎಐ ಅಧಿಕಾರಿಗಳಿಗೆ ರಿಪೋರ್ಟ್ ತಲುಪಿಸಿದೆ ಎಂದು ತಿಳಿದು ಬಂದಿದೆ. ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ.
ಲೋಡ್ ಟೆಸ್ಟಿಂಗ್ ಕಾರ್ಯ ನಡೆಯುವ ಹಿನ್ನೆಲೆ ಜ.16 ರಿಂದ 4 ದಿನ ‘ಪೀಣ್ಯ ಫ್ಲೈ ಓವರ್’ ಬಂದ್ ಆಗಿತ್ತು. ನಂತರ ಮತ್ತೆ ಕೇವಲ ಲಘು ವಾಹನಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.