
ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಉದ್ಯಮಿ ಪ್ರಶಾಂತ್ ಅವರ ಮನೆಯಲ್ಲಿ ಎರಡು ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಮನೆಯ ಕೆಲಸಕ್ಕೆ ಇದ್ದ ನೇಪಾಳ ಮೂಲದ ದಂಪತಿ ಕಳವು ಮಾಡಿದ್ದಾರೆ.
ಕುಟುಂಬ ಸಮೇತ ಉದ್ಯಮಿ ಪ್ರಶಾಂತ್ ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳಿದ್ದರು. ಫೆಬ್ರವರಿ 22ರಂದು ಅವರು ಪ್ರಯಾಗ್ ರಾಜ್ ಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಎರಡು ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಕದ್ದು ನೇಪಾಳ ಮೂಲದ ದಂಪತಿ ಪರಾರಿಯಾಗಿದ್ದಾರೆ. ಪ್ರಶಾಂತ್ ಅವರ ದೂರು ಆಧರಿಸಿ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೇಪಾಳ ಮೂಲದ ದಂಪತಿ ರಬೀಂದ್ರ ಶಾಹಿ, ಶಿಲ್ಪಾ ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಮನೆಯಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದವರೆಗಿನ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು, ಎರಡು ದಿನದಲ್ಲಿ 450ಕ್ಕೂ ಅಧಿಕ ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದಿರುವುದು ಬಯಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ದಂಪತಿ ಎಲ್ಲಿಗೆ ಹೋಗಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ದೂರು ದಾಖಲಾಗಿ ಎರಡು ದಿನ ಕಳೆದರೂ ಇನ್ನೂ ದಂಪತಿ ಸುಳಿವು ಸಿಕ್ಕಿಲ್ಲ.