![](https://kannadadunia.com/wp-content/uploads/2017/07/power-supply-electricity-wire-pole_650x400_61492601346.jpg)
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದ್ದು, ಅಪಾರ್ಟ್ ಮೆಂಟ್ ನ ಈಜುಕೊಳದಲ್ಲಿ ವಿದ್ಯುತ್ ಶಾಕ್ ನಿಂದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ವರ್ತೂರು ಸಮೀಪದ ಗುಂಜೂರಿನ ಅಪಾರ್ಟ್‌ಮೆಂಟ್ನ ಈಜುಕೊಳದಲ್ಲಿ ಗುರುವಾರ ತಡರಾತ್ರಿ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು ಮಾನ್ಯ ಎಂದು ಗುರುತಿಸಲಾಗಿದ್ದು, ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಈಜುಕೊಳದಲ್ಲಿ ಬಿದ್ದಿದ್ದ ಚೆಂಡನ್ನು ತರಲು ಹೋದಾಗ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.