ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ನೀಡಿದ ದೂರಿನ ಮೇರೆಗೆ ಫುಡ್ ಡೆಲಿವರಿ ಏಜೆಂಟ್ ಮೇಲೆ ಅಲ್ಲಿನ ನಿವಾಸಿಗಳು ಥಳಿಸಿದ್ದಾರೆ. ಆ ವ್ಯಕ್ತಿ ತನ್ನನ್ನು ಬಲವಂತವಾಗಿ ಕಟ್ಟಡದ ಟೆರೇಸ್‌ಗೆ ಕರೆದೊಯ್ದಿದ್ದಾನೆ ಎಂದು ಬಾಲಕಿ ಹೇಳಿದ್ದಳು.
ಹೌಸಿಂಗ್ ಸೊಸೈಟಿಯ ನಿವಾಸಿಗಳು ಮತ್ತು ಸೆಕ್ಯುರಿಟಿ ಗಾರ್ಡ್‌ಗಳು ಬಾಲಕಿ ಹೇಳಿದ ಮಾತನ್ನು ಕೇಳಿ ಆ ವ್ಯಕ್ತಿಗೆ ಅಮಾನುಷವಾಗಿ ಥಳಿಸಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳು ನಂತರ ಬಾಲಕಿ ಏಕಾಂಗಿಯಾಗಿ ಟೆರೇಸ್‌ಗೆ ಹೋಗಿ ಅಲ್ಲಿ ಆಟವಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಈ ಘಟನೆಯು ವಾರದ ಆರಂಭದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಪ್ರದೇಶದಲ್ಲಿ ನಡೆದಿದೆ. ಬಾಲಕಿಯನ್ನು ಹುಡುಕುತ್ತಿರುವಾಗ ಆಕೆಯ ಪೋಷಕರು ಟೆರೇಸ್ ತಲುಪಿದ ನಂತರ ಇದು ಬೆಳಕಿಗೆ ಬಂದಿದೆ. ಫುಡ್ ಡೆಲಿವರಿ ಏಜೆಂಟ್ ತನ್ನನ್ನು ಅಲ್ಲಿಗೆ ಕರೆದೊಯ್ದಿದ್ದಾನೆ ಮತ್ತು ತಪ್ಪಿಸಿಕೊಳ್ಳಲು ಕೈಯನ್ನು ಕಚ್ಚಿದೆ ಎಂದು ಹುಡುಗಿ ತನ್ನ ಪೋಷಕರಿಗೆ ತಿಳಿಸಿದ್ದಳು.
ಇದರಿಂದ ಕುಪಿತಗೊಂಡ ಬಾಲಕಿಯ ಪೋಷಕರು ಕೂಡಲೇ ಭದ್ರತಾ ಸಿಬ್ಬಂದಿಗೆ ಕರೆ ಮಾಡಿ ಅಪಾರ್ಟ್‌ಮೆಂಟ್‌ನ ಗೇಟ್‌ಗಳನ್ನು ಮುಚ್ಚಿದ್ದಾರೆ. ನಂತರ ಹುಡುಗಿ ಕ್ಯಾಂಪಸ್‌ನಲ್ಲಿದ್ದ ಡೆಲಿವರಿ ಏಜೆಂಟ್ ಕಡೆಗೆ ತೋರಿಸಿದಳು. ಆದರೆ ಪೊಲೀಸರು ಬರುವ ಮೊದಲು ಅವರು ವ್ಯಕ್ತಿಯನ್ನು ಥಳಿಸಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಟೆರೇಸ್‌ನಲ್ಲಿ ಪತ್ತೆಯಾದ ನಂತರ ಹುಡುಗಿ ತನ್ನ ಪೋಷಕರಿಗೆ ಸುಳ್ಳು ಹೇಳಿದ್ದಾಳೆ ಎಂಬುದು ಕಂಡು ಬಂದಿದೆ.