ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಯೋರ್ವ ‘ಸೂಸೈಡ್’ ಅಂತ ಪೊಲೀಸರಿಗೆ ಟ್ಯಾಗ್ ಮಾಡಿ ಕಾಣೆಯಾದ ಘಟನೆ ಬೆಂಗಳೂರಲ್ಲಿ ನಡೆದಿದೆ. ಘಟನೆ ಹಿನ್ನೆಲೆ ಪೋಷಕರು ಆತಂಕದಲ್ಲಿದ್ದಾರೆ.
ವಿದ್ಯಾರ್ಥಿಯೋರ್ವ ಟ್ವಿಟರ್ ಖಾತೆಯಲ್ಲಿ ಸ್ಕೋರ್ ಕಾರ್ಡ್ ಅಪ್ ಲೋಡ್ ಮಾಡಿ ನಂತರ ಸೂಸೈಡ್ ಎಂದು ಬರೆದು ಪೊಲೀಸರಿಗೆ ಟ್ಯಾಕ್ ಮಾಡಿದ್ದಾನೆ. ನಟ ಯಶ್ ಅವರ ಪ್ರೊಫೈಲ್ ಪಿಕ್ ಹಾಕಿಕೊಂಡ ವಿದ್ಯಾರ್ಥಿಯ ಹೆಸರು ಸ್ಪಷ್ಟವಾಗಿಲ್ಲ, ವಿದ್ಯಾರ್ಥಿಯನ್ನು ಕೂಡಲೇ ರಕ್ಷಣೆ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ಪರೀಕ್ಷೆ ಬರೆಯಲು ಇನ್ನೂ ಎರಡು ಬಾರಿ ಅವಕಾಶವಿದೆ. ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ..