
ಬೆಂಗಳೂರು: ಹೋಟೆಲ್ ಮಾಲೀಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾದ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಾತ್ರೆ ತೊಳೆಯುವಾಗ ವಿದ್ಯುತ್ ಶಾಕ್ ನಿಂದ ಮಹಿಳೆ ಸಾವು ಕಂಡಿದ್ದಾರೆ. ದಾಬಸ್ ಪೇಟೆಯ ಹೋಟೆಲ್ ನಲ್ಲಿ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ನಿಡವಂದ ಕಾಲೋನಿ ನಿವಾಸಿ ಸಿದ್ದಮ್ಮ(55) ಮೃತಪಟ್ಟವರು ಎಂದು ಹೇಳಲಾಗಿದೆ.
ಹೋಟೆಲ್ ಮಾಲೀಕ ಕಾರ್ಮಿಕರ ಸುರಕ್ಷತೆಗೆ ಗಮನಹರಿಸಿರಲಿಲ್ಲ. ಹೋಟೆಲ್ ಮಾಲೀಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.