ಬೆಂಗಳೂರು : ಬೆಂಗಳೂರಿನ ದೇವಹನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಡ್ರೋನ್ ಹಾರಾಟ ನಡೆಸಿದ್ದು, ತನಿಖೆಗೆ ಆದೇಶಿಸಲಾಗಿದೆ.
ಇಂದು ಬೆಳಗ್ಗೆ ಏರ್ ಪೋರ್ಟ್ ನಿಷೇಧಿತ ಪ್ರದೇಶವಾದ ರನ್ ವೇ ಬಳಿ ಡ್ರೋನ್ ಹಾರಾಟ ನಡೆಸಿದ್ದು, ಕೆಲಕಾಲ ಆತಂಕಕ್ಕೆ ಕಾರಣವಾಗಿದೆ. ಕೆಂಪೇಗೌಡ ಏರ್ ಪೋರ್ಟ್ ನ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಾಟ ನಡೆಸಿದ್ದು, ಬೆಂಗಳೂರು ಏರ್ ಪೋರ್ಟ್ ಸಿಬ್ಬಂದಿಗೆ ಎಟಿಸಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ದೆಹಲಿ,ಮುಂಬೈಗೆ ಹೊರಟಿದ್ದ ವಿಮಾನದ ಪೈಲಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಡ್ರೋನ್ ಹಾರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.