ಬೆಂಗಳೂರು: ಕೊರೋನಾ ಲಸಿಕೆ ಪೂರೈಸಲು ಡ್ರೋನ್ ಬಳಕೆ ಮಾಡಲಾಗಿದೆ. ಡ್ರೋನ್ ಮೂಲಕ ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ಸಾಗಿಸಲಾಗಿದೆ.
NAL ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಅಭಿವೃದ್ಧಿಪಡಿಸಿದ ಅಕ್ಟಾಕಾಪ್ಟರ್ ಮೂಲಕ ಯಶಸ್ವಿಯಾಗಿ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆಯನ್ನು ರವಾನೆ ಮಾಡಲಾಗಿದೆ. ಆಕ್ಟಾ ಕಾಪ್ಟರ್ 10 ನಿಮಿಷದಲ್ಲಿ 14 ಕಿಲೋಮೀಟರ್ ದೂರ ಕ್ರಮಿಸಿದೆ.
ರಸ್ತೆ ಮಾರ್ಗದಲ್ಲಿ ಆಗಿದ್ದರೆ 30 ರಿಂದ 40 ನಿಮಿಷ ಬೇಕಾಗುತ್ತದೆ. 15 ಕೆಜಿ ತೂಕದ ಐಸ್ ಬಾಕ್ಸ್ ನಲ್ಲಿ 50 ವಯಲ್ಸ್ ಲಸಿಕೆ ಸಾಗಿಸಲಾಗಿದೆ.