
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ನಡೆಸಿದೆ.
ಅಂತರ್ಜಲ ಹೆಚ್ಚಿರುವ ಕಡೆಗಳಲ್ಲಿ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ಹಾಗೂ ಜಲಮಂಡಳಿ ಸಹಯೋಗದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ 1477 ದಶಲಕ್ಷ ಲೀಟರ್ ನೀರು ಲಭ್ಯವಿದೆ. ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ನೀರನ್ನು ಒದಗಿಸಲಾಗುವುದು ಎಂದರು.
ಅಂತರ್ಜಲ ಹೆಚ್ಚಿರುವ ಕಡೆಗಳಲ್ಲಿ ಬೋರ್ ಕೊರೆಯುವ ಕೆಲಸ ಮಾಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ಕಾವೇರಿ ನೀರು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟು 58 ಕಡೆಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಅದರಲ್ಲಿ ಆರ್.ಆರ್.ನಗರ ಹಾಗೂ ಮಹಾದೇವಪುರದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿವಾರಣೆಗಗೈ 131 ಕೊಟಿ ಮೀಸಲಿಡಲಾಗಿದೆ. ಖಾಸಗಿ ವಾಟರ್ ಟ್ಯಾಂಕರ್ ಖರಿದಿಗೂ ನಿರ್ಧರಿಸಲಾಗಿದೆ ಎಂದರು.