ಬೆಂಗಳೂರು: ತನ್ನ ಮನೆಯ ಬಳಿ ಮದ್ಯಪಾನ ಮತ್ತು ಧೂಮಪಾನ ಮಾಡದಂತೆ ಇಬ್ಬರು ಯುವಕರಿಗೆ ಎಚ್ಚರಿಕೆ ನೀಡಿದ 45 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಪವನ್ ಕುಮಾರ್ ಮತ್ತು ನಂದಗೋಪಾಲ್ ಎಂಬ ಇಬ್ಬರು ಯುವಕರು ವೆಂಕಟೇಶ್ (45) ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ.
ವೆಂಕಟೇಶ್ ಅವರ ಚಿಕ್ಕಪ್ಪ ಬಿನ್ ಜೋಸೆಫ್ ಅವರು ನೀಡಿದ ದೂರಿನ ಪ್ರಕಾರ, ಮೃತರು ಅಡ್ಡಾಡಲು ಹೋಗಿದ್ದಾಗ ರಾಮಚಂದ್ರಪುರದ ತಮ್ಮ ನಿವಾಸದ ಬಳಿಯ ಖಾಲಿ ಸ್ಥಳದಲ್ಲಿ ಇಬ್ಬರೂ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರುವುದನ್ನು ಕಂಡು ಬುದ್ದಿವಾದ ಹೇಳಿದ್ದಾರೆ,ಪವನ್ ಕುಮಾರ್ ಮತ್ತು ನಂದ ಗೋಪಾಲ್ ವೆಂಕಟೇಶ್ ಅವರೊಂದಿಗೆ ಜಗಳವಾಡಿದರು ಮತ್ತು ಪವನ್ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲು ವಿಫಲರಾದರು ಮತ್ತು ಬುಧವಾರ ಬೆಳಿಗ್ಗೆ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.