alex Certify ರಾಜ್ಯದಲ್ಲಿ 22 ಸಾವಿರ ಕೊರೋನಾ ಸಕ್ರಿಯ ಕೇಸ್, ಜಿಲ್ಲೆಗಳಲ್ಲೂ ಭಾರಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ 22 ಸಾವಿರ ಕೊರೋನಾ ಸಕ್ರಿಯ ಕೇಸ್, ಜಿಲ್ಲೆಗಳಲ್ಲೂ ಭಾರಿ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು 5031 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,22,603 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 271 ಗುಣಮುಖರಾಗಿದ್ದಾರೆ. ಇದುವರೆಗೆ 29,62,043 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು ಒಬ್ಬರು ಮೃತಪಟ್ಟಿದ್ದು, ಇದುವರೆಗೆ 38,358 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,173 ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇಕಡ 3.95 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 4324 ಜನರಿಗೆ ಸೋಂಕು ತಗುಲಿದ್ದು, 172 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 18,913 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿಲ್ಲ.

ಬಳ್ಳಾರಿ 21, ಬೆಳಗಾವಿ 64, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 4324, ಚಿಕ್ಕಬಳ್ಳಾಪುರ 20, ದಕ್ಷಿಣಕನ್ನಡ 106, ಧಾರವಾಡ 48, ಗದಗ 11, ಹಾಸನ 47, ಕಲಬುರ್ಗಿ 25, ಕೊಡಗು 19, ಕೋಲಾರ 14, ಮಂಡ್ಯ 66, ಮೈಸೂರು 65, ಶಿವಮೊಗ್ಗ 16, ತುಮಕೂರು 20, ಉಡುಪಿ 92, ಉತ್ತರಕನ್ನಡ 13, ವಿಜಯಪುರ 11 ಹೊಸ ಪ್ರಕರಣ ವರದಿಯಾಗಿವೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೊರೋನಾ ಸಾವಿನ ಬಗ್ಗೆ ವರದಿಯಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...