ಹೆಲ್ಮೆಟ್ ಕಡ್ಡಾಯ ಅನ್ನೋ ಕಟ್ಟುನಿಟ್ಟಿನ ನಿಯಮ ಜಾರಿ ಇದೆ. ದಂಡ ಕಟ್ಟಬೇಕು ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಾರೆ ವಿನಃ ಸುರಕ್ಷತೆಗಾಗಿ ಅಲ್ಲ. ಉತ್ತಮ ಗುಣಮಟ್ಟದ ಹೆಲ್ಮೆಟ್ ಆಗಿಲ್ಲದಿದ್ದರೂ, ಕಡಿಮೆ ದುಡ್ಡು ಎಂಬ ಕಾರಣಕ್ಕೆ, ಡ್ಯುಪ್ಲಿಕೇಟ್ ಹೆಲ್ಮೆಟ್‌ಗಳನ್ನ ಬಳಸೋ ಜನರು ಹೆಚ್ಚು.
ಆದರೆ ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಉಪಯೋಗಿಸಿದರೆ ಅಪಾಯದಿಂದ ಹೇಗೆ ಪಾರಾಗಬಹುದು. ಈ ಸಂದೇಶ ಕೊಡುವಂತ ವಿಡಿಯೋವನ್ನ ಪೊಲೀಸ್ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಶೇರ್ ಮಾಡಿಕೊಂಡಿದ್ದಾರೆ.
ಬೈಕ್ ಸವಾರನೊಬ್ಬ ತಿರುವಿನಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದು ಬಿಡ್ತಾನೆ. ಅದೇ ಸಮಯದಲ್ಲಿ ಎದುರಿನಿಂದ ಬಂದ ಬಸ್ ಚಕ್ರದಡಿ ಸಿಲುಕುತ್ತಾನೆ. ಅದೃಷ್ಟವಶಾತ್ ಆತ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸಿರುತ್ತಾನೆ. ಆದ್ದರಿಂದ ಬಸ್ ಚಕ್ರದಡಿಯಲ್ಲಿ ಇದ್ದರೂ ಆತನಿಗೆ ಚಿಕ್ಕ ಗಾಯವೂ ಆಗಿರಲಿಲ್ಲ. ಇದೇ ವಿಡಿಯೋವನ್ನ ಪೊಲೀಸ್ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಹಂಚಿಕೊಂಡು ‘‘ಐಎಸ್ ಐ ಮಾರ್ಕ್ ಉತ್ತಮ ಗುಣಮಟ್ಟದ ಹೆಲ್ಮೆಟ್ ಜೀವರಕ್ಷಕ“ ಅನ್ನೊ ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಬೈಕ್ ಸವಾರನನ್ನ ಶ್ರೀ ಅಲೆಕ್ಸ್ ಸಿಲ್ವಾ ಪೆರೆಸ್ ಅಂತ ಗುರುತಿಸಲಾಗಿದೆ. ಈತ ಬಸ್ ಕೆಳಗೆ ಬಿದ್ದಾಕ್ಷಣ ಬಸ್ ಚಕ್ರ ಆತನ ತಲೆ ಮೇಲೆಯೇ ಹರಿದು ಹೋಗಲಿತ್ತು. ಆದರೆ ಹೆಲ್ಮೆಟ್ ಗಟ್ಟಿ ಇದ್ದರಿಂದ ಬಸ್ ತಕ್ಷಣವೇ ನಿಂತಿತ್ತು. ಘಟನೆ ವೇಳೆಯಲ್ಲಿ ಅಲ್ಲಿದ್ದವರು ತಕ್ಷಣ ಆತನ ಸಹಾಯಕ್ಕೆ ಬಂದು ಹೊರಗೆ ಎಳೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಮಹತ್ವ ಜನರಿಗೆ ಅರಿವಾಗಲೆಂದು ಈ ವಿಡಿಯೋವನ್ನ ಬಳಸಿಕೊಳ್ಳುತ್ತಿದ್ದಾರೆ.