ಬೆಂಗಳೂರು: ಈ ತಿಂಗಳಾಂತ್ಯದೊಳಗೆ ಬೆಂಗಳೂರಿನಿಂದ ಕೊಯಮತ್ತೂರ್ ಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭವಾಗಲಿದೆ.
ಕರ್ನಾಟಕದಲ್ಲಿ ಮೂರು ವಂದೇ ಭಾರತ್ ರೈಲು ಇದ್ದು, ಬೆಂಗಳೂರಿನಿಂದ ಹೈದರಾಬಾದ್ ಹಾಗೂ ಬೆಳಗಾವಿಗೆ, ಮೈಸೂರಿನಿಂದ ಚೆನ್ನೈ ಹಾಗೂ ಕೊಯಮತ್ತೂರ್ ನಡುವೆ ಈಗಾಗಲೇ ಸಂಚರಿಸುತ್ತಿದೆ. ಬೆಂಗಳೂರಿನಿಂದ ಕೋಯಮತ್ತೂರ್ ಗೆ ಈಗಾಗಲೇ ಉದಯ್ ಎಕ್ಸ್ ಪ್ರೆಸ್ ಕೂಡ ಸಂಚರಿಸುತ್ತಿದೆ. ಇದರ ಜೊತೆಗೆ ಈಗ ಬೆಂಗಳೂರಿನಿಂದ ಕೊಯಮತ್ತೂರ್ ಗೆ ವಂದೇ ಭಾರತ್ ರೈಲು ಕೂಡ ಆರಂಭವಾಗಲಿದೆ. ಈ ಮೂಲಕ ರಾಜ್ಯಕ್ಕೆ ನಾಲ್ಕು ವಂದೆ ಭಾರತ್ ಎಕ್ಸ್ ಪ್ರೆಸ್ ರೈಲು ಸಿಕ್ಕಂತಾಗುತ್ತದೆ ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ.
ಕೊಯಮತ್ತೂರಿನ ಹಲವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವಂದೇ ಭಾರತ್ ಎಕ್ಸ್ ಪ್ರೆಸ್ ಮೂಲಕ ಬೆಂಗಳೂರು ಮತ್ತು ಕೊಯಮತ್ತೂರ್ ನಡುವೆ ಸಂಚರಿಸಲು ಅವರಿಗೆ ಅನುಕೂಲವಾಗಲಿದೆ.
ಉದಯ್ ಎಕ್ಸ್ ಪ್ರೆಸ್ ಬೆಂಗಳೂರಿನಿಂದ ಕೊಯಮತ್ತೂರ್ ಗೆ 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ವಂದೇ ಭಾರತ್ ರೈಲು ಇದಕ್ಕಿಂತ ಎಂದೆರಡು ಗಂಟೆ ಕಡಿಮೆ ಸಮಯ ತೆಗೆದುಕೊಳ್ಳಲಿದೆ. ಇದರಿಂದ ಪ್ರಯಾಣಿಕರಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.