alex Certify ಎಲ್ಲೆಂದರಲ್ಲಿ ಕಸ ಹಾಕುವವರ ಸಾಕ್ಷಿ ನೀಡಿದವರಿಗೆ BBMP ಯಿಂದ ‘ಪ್ರಶಸ್ತಿ ಪತ್ರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೆಂದರಲ್ಲಿ ಕಸ ಹಾಕುವವರ ಸಾಕ್ಷಿ ನೀಡಿದವರಿಗೆ BBMP ಯಿಂದ ‘ಪ್ರಶಸ್ತಿ ಪತ್ರ’

ರಾಜ್ಯ ರಾಜಧಾನಿ ಬೆಂಗಳೂರನ್ನು ಕ್ಲೀನ್ ಸಿಟಿ ಮಾಡಲು ಮುಂದಾಗಿರುವ ಮಹಾನಗರ ಪಾಲಿಕೆ, ಎಲ್ಲೆಂದರಲ್ಲಿ ಕಸ ಹಾಕುವವರ ಕುರಿತು ಸಾಕ್ಷಿ ನೀಡಿದರೆ ಅಂತವರಿಗೆ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಿದೆ.

ಪ್ರಶಸ್ತಿ ಪತ್ರದ ಮೇಲೆ ‘ಪರಿಸರ ಹಿತೈಷಿ’ ಎಂದು ಇರಲಿದ್ದು, ಇದರಿಂದ ಬೆಂಗಳೂರು ನಗರದ ಸ್ವಚ್ಛತೆಗೆ ಸಹಾಯವಾಗಬಹುದು ಎಂಬ ಲೆಕ್ಕಾಚಾರ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ. ಬಹಳಷ್ಟು ಮಂದಿ ರಸ್ತೆಗಳಲ್ಲಿ, ಖಾಲಿ ಸೈಟುಗಳಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ನಗರ ಸ್ವಚ್ಛತೆಗೆ ಧಕ್ಕೆ ಎಂಬ ಕಾರಣಕ್ಕೆ ಈಗ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ.

ಈ ರೀತಿ ಕಸ ಹಾಕುವವರಿಗೆ ಭಾರಿ ದಂಡ ವಿಧಿಸಲು ತೀರ್ಮಾನಿಸಲಾಗಿದ್ದು, ಅಲ್ಲದೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬಿಬಿಎಂಪಿಯಲ್ಲಿ 18,202 ಪೌರಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Úloha pre skutočných géniov: Hľadanie pytona v oceáne Výzva pre dravé zraky: nájdite ďalšie 4 čísla