
ಬೆಂಗಳೂರು: ಬೆಂಗಳೂರಿನಲ್ಲಿ ಫ್ಲೈ ಓವರ್ ಮೇಲೆ ಕ್ರೆಟಾ ಕಾರ್ ಪಲ್ಟಿಯಾಗಿದೆ. ಯಶವಂತಪುರ ಫ್ಲೈಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಅವರು ಪ್ರಾಣಾಯದಿಂದ ಅವರು ಪಾರಾಗಿದ್ದಾರೆ. ಸಂಜಯನಗರದಿಂದ ಕಾರ್ ನಲ್ಲಿ ರಾಜಾಜಿನಗರಕ್ಕೆ ಯಶ್ವಂತಪುರ ಮಾರ್ಗವಾಗಿ ಕಾರ್ ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ ಮೇಲೆ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಗಾಯಗೊಂಡಿದ್ದ ನಾಲ್ವರನ್ನು ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ಪಲ್ಟಿಯಾಗಿದ್ದ ಕಾರ್ ಅನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.