
ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು ಮೊದಲ ಜಯದ ಹುಡುಕಾಟದಲ್ಲಿದೆ. ಇಂದು ಬೆಂಗಳೂರು ಬುಲ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ. ಹರಿಯಾಣ ಕೂಡ ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದು, ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
ನಿನ್ನೆಯಿಂದ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿದ್ದು ಕಿಚ್ಚ ಸುದೀಪ್ ಪಂದ್ಯ ವೀಕ್ಷಿಸಲು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದರು ಬೆಂಗಳೂರು ಬುಲ್ಸ್ ತಂಡದ ಭರತ್ ಸೂಪರ್ ಟೆನ್ ಗಳಿಸಿದರೂ ಗೆಲ್ಲಲು ಸಾಧ್ಯವಾಗಿಲ್ಲ ದಬಾಂಗ್ ಡೆಲ್ಲಿ ಅಬ್ಬರಕ್ಕೆ ಬೆಂಗಳೂರು ಬುಲ್ಸ್ ತತ್ತರಿಸಿ ಹೋಗಿದೆ.
ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ ತೆಲುಗು ಟೈಟನ್ಸ್ ಸೆಣಸಾಡಲಿದ್ದು ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ಮತ್ತು ಪವನ್ ಶೆರಾವತ್ ಅವರ ಅಬ್ಬರದ ರೈಡಿಂಗ್ ಅನ್ನು ನೋಡಬಹುದಾಗಿದೆ.
