ಕಬಡ್ಡಿ ಆಟ ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಈ ಬಾರಿ ಪ್ರೊ ಕಬಡ್ಡಿ ಭರ್ಜರಿ ಮನರಂಜನೆ ನೀಡುತ್ತಿದ್ದು ಹೊಸ ಪ್ರತಿಭೆಗಳಿಗೂ ಅವಕಾಶ ಸಿಗುತ್ತಿದೆ. ಇಂದು ಪ್ರೊ ಕಬಡ್ಡಿಯ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಹಾಗೂ ಯುಪಿ ಯೋಧಾಸ್ ಮುಖಾಮುಖಿಯಾಗಲಿದ್ದು, ಕಬಡ್ಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಬೆಂಗಳೂರು ಬುಲ್ಸ್ ಅವರಿಗೆ ಬೆಂಕಿ ಭರತ್ ಆಸರೆಯಾಗಲೇಬೇಕಾಗಿದೆ.
ಯುಪಿ ಯೋಧಸ್ ತಂಡದ ರೈಡರ್ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ಅಬ್ಬರವನ್ನುತಡೆಯುವುದು ತುಂಬಾ ಮುಖ್ಯವಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿ ಪಂದ್ಯದಲ್ಲೂ ಸ್ಯಾಂಡಲ್ ವುಡ್ ನ ಸಿನಿ ತಾರೆಯರು ಆಗಮಿಸುವ ಮೂಲಕ ಎಲ್ಲಾ ತಂಡದ ಆಟವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.