ಬೆಂಗಳೂರು: ಗಾಜು ಮಿಶ್ರಿತ ಗಾಳಿಪಟದ ಮಾಂಜಾ ದಾರ ಗುತ್ತಿಗೆಗೆ ತಾಗಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನ ಥಣಿಸಂದ್ರದ ಸಿಎಂಎ ಕನ್ವೆನ್ಷನ್ ಹಾಲ್ ಬಳಿ ಎಂ.ಇ. ನಾಸಿಮಿ ಬೈಕ್ ನಲ್ಲಿ ಹೋಗುವಾಗ ಮಕ್ಕಳು ಹಾರಿಸಿದ ಗಾಜು ಲೇಪಿತ ಮಾಂಜಾ ದಾರ ಕುತ್ತಿಗೆ ಮತ್ತು ಕೈಗೆ ತಾಗಿ ರಕ್ತಸ್ರಾವವಾಗಿದೆ. ಮಾಂಜಾ ದಾರ ಬಳಕೆ ನಿಷೇಧವಿದ್ದರೂ, ಗಾಳಿಪಟ ಹಾರಿಸಲು ಅದನ್ನು ಬಳಸಲಾಗಿದೆ.
ನಾಸಿಮಿ ಅವರು ಗಾಯಗೊಂಡಿದ್ದು, ಇಂತಹ ಅಪಾಯಕಾರಿ ಮಾಂಜಾ ದಾರ ನಿಷೇಧವಿದ್ದರೂ ಬಳಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಸಮೇತ ಪ್ರಕಟಿಸಿ ಅದನ್ನು ಬೆಂಗಳೂರು ನಗರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ ನಾಸಿಮಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.