alex Certify ಪ್ಲಾಸ್ಟಿಕ್ ಬಳಕೆ ತ್ಯಜಿಸಲು ಜಾಗೃತಿ; ಬಿಬಿಎಂಪಿಯ RRR ಕಾರ್ಯಕ್ರಮದಡಿ 533 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ಬಳಕೆ ತ್ಯಜಿಸಲು ಜಾಗೃತಿ; ಬಿಬಿಎಂಪಿಯ RRR ಕಾರ್ಯಕ್ರಮದಡಿ 533 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹ

ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಉತ್ತೇಜಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಬಿಬಿಎಂಪಿ ಮೇ 20 ರಿಂದ ಜೂನ್ 5 ರವರೆಗೆ RRR (Reduce, Reuse, Recycle) ಕಾರ್ಯಕ್ರಮವನ್ನು ನಡೆಸಿತ್ತು. ಇದರಡಿ ಒಟ್ಟು 533 ಕೆಜಿ ಪ್ಲಾಸ್ಟಿಕ್, 3,273 ಪುಸ್ತಕಗಳು, 1,910 ಕೆಜಿ ಬಟ್ಟೆ, ಮತ್ತು ನಗರದ 49 ಕೇಂದ್ರಗಳಿಂದ 468 ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ.

ಹಸಿರು ದಳ, ಅನುಭೂತಿ ವೆಲ್ಫೇರ್ ಫೌಂಡೇಶನ್, ಸಮರ್ಥನಂ, ಸ್ವಚ್ಛ ಸೇರಿದಂತೆ ಏಳು ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳನ್ನು ಮರುಬಳಕೆ ಅಥವಾ ಮಾರಾಟ ಮಾಡಿದರೆ, ಇತರೆ ವಸ್ತುಗಳನ್ನು ರೀ ಸೈಕ್ಲಿಂಗ್ ಗೆ ಕಳುಹಿಸಲಾಗಿದೆ ಎಂದು ಹಸಿರು ದಳದ ಡಿಡಬ್ಲ್ಯೂಸಿಸಿ ವ್ಯವಸ್ಥಾಪಕ ಮತ್ತು ಸಂಯೋಜಕ ಚಿನ್ನಯ್ಯ ಹೇಳಿದರು. ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನು ಬನಶಂಕರಿಯಲ್ಲಿರುವ ಹಸಿರು ದಳದ ವತಿಯಿಂದ ನಿರ್ವಹಿಸುವ ಗ್ರಂಥಾಲಯಕ್ಕೆ ತೆಗೆದುಕೊಂಡು ಹೋದರೆ, ಹರಿದ ಪುಸ್ತಕಗಳನ್ನು ಮರುಬಳಕೆಗೆ ಕಳುಹಿಸಲಾಗಿದೆ. ಉಪಯೋಗಿಸಬಹುದಾದ ಬಟ್ಟೆಗಳನ್ನು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗಳಿಗೆ ನೀಡಲಾಯಿತು ಎಂದು ಅವರು ಹೇಳಿದರು. ಅದೇ ರೀತಿ ಸಂಗ್ರಹಿಸಿದ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಇ-ತ್ಯಾಜ್ಯ ಮಾರಾಟಗಾರರಿಗೆ ಹಸ್ತಾಂತರಿಸಲಾಯಿತು.

ಸ್ವಚ್ಛ ಭಾರತ್ ಮಿಷನ್ (ನಗರ) 2.0 ಅಡಿಯಲ್ಲಿ ರಾಷ್ಟ್ರವ್ಯಾಪಿ ಸ್ವಚ್ಛತಾ ಕಾರ್ಯಕ್ರಮವನ್ನು ಜಾರಿಗೆ ತರಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶನದೊಂದಿಗೆ ‘ಮೈ ಲೈಫ್, ಮೈ ಕ್ಲೀನ್ ಸಿಟಿ’ ಅಭಿಯಾನದ ಭಾಗವಾಗಿ ಬಿಬಿಎಂಪಿ ಈ ಕಾರ್ಯಕ್ರಮವನ್ನು ಪರಿಚಯಿಸಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಸುಸ್ಥಿರ, ತ್ಯಾಜ್ಯ-ಮುಕ್ತ ಜೀವನಶೈಲಿಯನ್ನು ಉತ್ತೇಜಿಸಲು ಈ ಉಪಕ್ರಮವು ಗುರಿಯನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...