ಬೆಂಗಳೂರು: ಬೆಂಗಳೂರು ಬಂದ್ ಭದ್ರತೆಯಲ್ಲಿದ್ದ ಯಶವಂತಪುರ ಸಂಚಾರ ಠಾಣೆ ಪೊಲೀಸರಿಗೆ ನೀಡಿದ್ದ ತಿಂಡಿ ಪೊಟ್ಟಣದಲ್ಲಿ ಸತ್ತ ಇಲ್ಲಿ ಪತ್ತೆಯಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸತ್ತ ಇಲಿ ಮಿಶ್ರಿತ ಆಹಾರ ಪೂರೈಕೆ ಮಾಡಿದ ಪ್ರಕರಣವನ್ನು ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಆಹಾರ ಪೂರೈಕೆಯ ಜವಾಬ್ದಾರಿ ಹೊತ್ತಿದ್ದ ಇನ್ಸ್ ಪೆಕ್ಟರ್ ಗಳಿಗೆ ನೋಟಿಸ್ ನೀಡಿದ್ದು, ಆಹಾರ ತಯಾರಿಸಿದ್ದ ಹೋಟೇಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.