ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಲ್ಲಿ ಸಂಭವಿಸುತ್ತಿರುವ ಅವಘಡಗಳು ಮುಂದುವರೆದಿದೆ. ರಸ್ತೆ ಗುಂಡಿಗೆ ಆಟೊ ಪಲ್ಟಿಯಾಗಿ ಬಿದ್ದಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದಿದೆ.
ಬನ್ನೇರುಘಟ್ಟ ಹಾಗೂ ಅಂಜನಪುರ 80 ಫೀಟ್ ರಸ್ತೆಯಲ್ಲಿ ಆಟೋ ಪಲ್ಟಿಯಾಗಿ ಬಿದ್ದಿದ್ದು, ಸಾರ್ವಜನಿಕರು ಆಟೋ ಚಾಲಕನನ್ನು ರಕ್ಷಿಸಿದ್ದಾರೆ.
ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.