ಬೆಂಗಳೂರು: ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಯುವತಿಗೆ ಖಾಸಗಿ ಅಂಗ ತೋರಿಸಿ ಆಟೋ ಚಾಲಕ ವಿಕೃತಿ ಮೆರೆದಿದ್ದಾನೆ.
ರಾಜಾಜಿನಗರದ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಯುವತಿಗೆ ಆಟೋ ಚಾಲಕ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗ ತೋರಿಸಿದ್ದಾನೆ. ಮಹಿಳೆ ಮುಂದೆ ಪ್ಯಾಂಟ್ ತೆಗೆದು ಎರಡು ಬಾರಿ ಅಂಗಾಂಗ ಪ್ರದರ್ಶಿಸಿದ್ದಾನೆ. ಇಂದು ಮಧ್ಯಾಹ್ನ ಯುವತಿ ಊಟಕ್ಕೆ ಬ್ಯೂಟಿ ಪಾರ್ಲರ್ ನಿಂದ ಸಮೀಪದಲ್ಲಿದ್ದ ಮನೆಗೆ ಹೋಗುವಾಗ ಈಸ್ಟ್ ವೆಸ್ಟ್ ಕಾಲೇಜು ಬಳಿ ಹಿಂಬಾಲಿಸಿಕೊಂಡು ಬಂದ ಆಟೋ ಚಾಲಕ ಪ್ಯಾಂಟ್ ತೆಗೆದು ಖಾಸಗಿ ಅಂಗ ಪ್ರದರ್ಶಿಸಿದ್ದಾನೆ.
ಬೆಚ್ಚಿಬಿದ್ದ ಯುವತಿ ಕಾಲಲಿದ್ದ ಚಪ್ಪಲಿ ತೆಗೆದುಕೊಂಡು ಎಸೆದಿದ್ದಾಳೆ. ಬಳಿಕ ಅಲ್ಲಿಂದ ಆಟೋ ಚಾಲಕ ಪರಾರಿಯಾಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಯುವತಿ ಮುಂದೆ ಬಂದು ಅದೇ ರೀತಿ ಖಾಸಗಿ ಅಂಗ ತೋರಿಸಿದ್ದಾನೆ. ಯುವತಿ ಜೋರಾಗಿ ಕೂಗೂಡಿದಾಗ ಸ್ಥಳೀಯರು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿ ಮಾಗಡಿ ರೋಡ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.