ಬೆಂಗಳೂರು: ಕೆಲವರಿಗೆ ಇತರರ ಮೊಗದಲ್ಲಿ ನಗು ತರಿಸುವುದು ಎಂದರೆ ತುಂಬಾ ಖುಷಿಯ ವಿಷಯ. ಕಷ್ಟಪಟ್ಟು ದುಡಿಯುವ ಬೀದಿ ವ್ಯಾಪಾರಿಗಳ ಮೊಗದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ನಗು ತರಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಛಾಯಾಚಿತ್ರಕಾರ ಅದ್ಭುತ ಭಾವಚಿತ್ರವನ್ನು ರಚಿಸಿ ಈ ರೀತಿ ವ್ಯಾಪಾರಿಯ ಮೊಗದಲ್ಲಿ ಸಂತಸ ತರಿಸಿದ್ದಾರೆ.
ಮನೋಜ್ ಕುಮಾರ್ ಅವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಬೋಂಡಾ ಮಾರಾಟಗಾರರಿಂದ ಕೆಲವು ತಿಂಡಿಗಳನ್ನು ಖರೀದಿಸುವುದನ್ನು ತೋರಿಸುತ್ತದೆ. ಅದನ್ನು ತಿಂದಾದ ಬಳಿಕ ಕಲಾವಿದ ಮಾರಾಟಗಾರನ ಭಾವಚಿತ್ರವನ್ನು ಚಿತ್ರಿಸಲು ಪ್ರಾರಂಭಿಸಿದ್ದಾರೆ.
ಅದು ಮುಗಿಸಿದ ನಂತರ, ಅವರು ಮಾರಾಟಗಾರನನ್ನು ಸಮೀಪಿಸಿ ಚಿತ್ರ ತೋರಿಸಿದಾಗ ಆತ ತುಂಬಾ ಖುಷಿಯಿಂದ ನಗುವುದನ್ನು ಕಾಣಬಹುದು. ಈ ಪೋಸ್ಟ್ ಲಕ್ಷಾಂತರ ವೀಕ್ಷಣೆಗಳನ್ನು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಜನರು ವೀಡಿಯೊದಿಂದ ಸಂಪೂರ್ಣವಾಗಿ ಸಂತೋಷಪಟ್ಟಿದ್ದಾರೆ ಮತ್ತು ಮನುಷ್ಯನ ನಗು ಎಷ್ಟು ಅಮೂಲ್ಯವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.