ಬೆಂಗಳೂರು : ಇತ್ತೀಚೆಗಷ್ಟೇ ಸುಂದರ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದ್ದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಸಮಯ ಕ್ಷಮತೆಯಲ್ಲಿ ಬೆಂಗಳೂರು ಏರ್ ಪೋರ್ಟ್ ಜಗತ್ತಿನಲ್ಲೇ ನಂ.3 ಸ್ಥಾನ ಪಡೆದಿದೆ.
ಕಾರ್ಯಾಚರಣೆಯಲ್ಲಿನ ನಿರ್ವಹಣಾ ಸಾಧನೆ ಮತ್ತು ಸಮಯ ಕ್ಷಮತೆ ವಿಷಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಅಮೆರಿಕದ ಮಿನ್ನೆಪೊಲೀಸ್ ನಿಲ್ದಾಣ ಮೊದಲ ಸ್ಥಾನ ಪಡೆದಿದ್ರೆ, 2ನೇ ಸ್ಥಾನದಲ್ಲಿ ಹೈದ್ರಾಬಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ . ಮೂರನೇ ಸ್ಥಾನವನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ವಿಶ್ವದಲ್ಲೇ ಸುಂದರ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದ್ದ ಏರ್ಪೋರ್ಟ್ಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.