alex Certify BIG NEWS: HLFT-42 ಯುದ್ಧ ವಿಮಾನದ ಮೇಲಿದ್ದ ಬಜರಂಗಬಲಿ ಫೋಟೋ ತೆರವು; ಸ್ಪಷ್ಟನೆ ನೀಡಿದ HAL ಎಂಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: HLFT-42 ಯುದ್ಧ ವಿಮಾನದ ಮೇಲಿದ್ದ ಬಜರಂಗಬಲಿ ಫೋಟೋ ತೆರವು; ಸ್ಪಷ್ಟನೆ ನೀಡಿದ HAL ಎಂಡಿ

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್ ಶೋ ನಡೆಯುತ್ತಿದ್ದು, ಬಾನಂಗಳದಲ್ಲಿ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ, ಚಮತ್ಕಾರಗಳು ಕಣ್ಮನ ಸೆಳೆಯುವಂತಿದೆ. ಈ ವೇಳೆ HLFT-42 ಯುದ್ಧ ವಿಮಾನದ ಮೇಲೆ ಬಜರಂಗಬಲಿ ಫೋಟೊ ಆಕ್ಷೇಪಕ್ಕೆ ಕಾರಣವಾಗಿತ್ತು.

HLFT-42 ಯುದ್ಧ ವಿಮಾನದ ಮೇಲೆ ಹನುಮನ ಫೋಟೋ ಹಾಕುವ ಮೂಲಕ ಮಾರುತ್ ಹೆಸರಿನ HLFT-42 ಯುದ್ಧ ವಿಮಾನವನ್ನು ಒಂದು ಧರ್ಮಕ್ಕೆ ಸೀಮಿತ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಯುದ್ಧ ವಿಮಾನದ ಮೇಲಿದ್ದ ಬಜರಂಗಬಲಿ ಫೋಟೋವನ್ನು ಹೆಚ್ ಎ ಎಲ್ ತೆರವುಗೊಳಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಚ್.ಎ.ಎಲ್ ಎಂಡಿ, ಚೇರ್ಮನ್ ಅನಂತ ಕೃಷ್ಣನ್, ಹನುಮಾನ್ ಶಕ್ತಿಯ ಸಂಕೇತವೆಂದು ನಾವು HLFT-42 ಯುದ್ಧ ವಿಮಾನದ ಮೇಲೆ ಫೋಟೋ ಹಾಕಿದ್ದೆವು. ಹನುಮಾನ್ ಅಷ್ಟೇ ಶಕ್ತಿಯುತವಾದ ವಿಮಾನ ಎಂದು ಬಿಂಬಿಸುವ ನಿಟ್ಟಿನಲ್ಲಿ ಹಾಕಲಾಗಿತ್ತು. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ಫೋಟೋ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...