
ಬೆಂಗಳೂರಿನಲ್ಲಿ ಮತ್ತೊಂದು ಐಷಾರಾಮಿ ಕಾರ್ ಅಪಘಾತಕ್ಕೀಡಾಗಿದೆ ತಡರಾತ್ರಿ. ಜಾಲಿರೈಡ್ ಹೋಗಿದ್ದ ಉದ್ಯಮಿಯೊಬ್ಬರ ಮಗ ಸಂಚರಿಸುತಿದ್ದ ಕಾರ್ ಕಮಾಂಡೋ ಆಸ್ಪತ್ರೆಯ ಬಳಿ ಅಪಘಾತಕ್ಕೀಡಾಗಿದೆ.
ಇಂದಿರಾನಗರದಲ್ಲಿ ಜವೇರ್ ಮತ್ತು ಸ್ನೇಹಿತರು ರಾತ್ರಿ ಪಾರ್ಟಿ ಮಾಡಿ ಮೂರು ಐಷಾರಾಮಿ ಕಾರ್ ನಲ್ಲಿ ಹೊರಟಿದ್ದಾರೆ. ಜವೇರ್ ಹಾಗೂ ಆತನ ಸ್ನೇಹಿತರು ಇದ್ದ ಕಾರ್ ಕೇಶವಮೂರ್ತಿ ಎಂಬುವವರ ಕ್ಯಾಬ್ ಗೆ ಡಿಕ್ಕಿಯಾಗಿದೆ. ಕೇಶವಮೂರ್ತಿ ಕ್ಯಾಬ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು.
ಅಪಘಾತದ ರಭಸಕ್ಕೆ ಕಾರ್ ಗಳು ಸಂಪೂರ್ಣ ಜಖಂ ಆಗಿವೆ. ಆಘಾತದ ಸ್ಥಳದಲ್ಲಿ ಜವೇರ್ ಸ್ನೇಹಿತರು ಹೈಡ್ರಾಮ ನಡೆಸಿದ್ದಾರೆ. ಕೇಶವಮೂರ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಘಾತವೆಸಗಿದ ಕಾರ್ ಚಾಲಕ ಜವೇರ್ ನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಐಷಾರಾಮಿ ಕಾರ್ ಔಶಕ್ಕೆ ಪಡೆದು ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.