ಬೆಂಗಳೂರು : ಜೊತೆಯಲ್ಲಿ ಕೆಲಸ ಮಾಡ್ತಿದ್ದ ಯುವತಿಗೆ ಟೆಕ್ಕಿಯೋರ್ವ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಎಫ್ ಐ ಆರ್ ದಾಖಲಾಗಿದೆ.
ಖಾಸಗಿ ಕಂಪನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಸಹದ್ಯೋಗಿ ವಿರುದ್ಧ FIR ದಾಖಲಾಗಿದೆ.
ಬೆಂಗಳೂರಿನ ಎಂ.ಜಿ ರಸ್ತೆ ಸಮೀಪದ ಮೇಗ್ರಾಥ್ ರಸ್ತೆಯಲ್ಲಿರುವ ಲಿಬ್ರೆ ವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಪ್ರೇಮ್ ಚಂದರ್, ಕೆಲಸದ ವೇಳೆ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೆಲಸ ಮಾಡುವ ವೇಳೆ ಈತ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಇದರಿಂದ ಬೇಸತ್ತ ಸಂತ್ರಸ್ಥ ಯುವತಿ ಹಲಸೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.