alex Certify ಬೆಂಗಳೂರು : 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಾಠ ! ಪೋಷಕರಿಂದ ತೀವ್ರ ವಿರೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು : 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಾಠ ! ಪೋಷಕರಿಂದ ತೀವ್ರ ವಿರೋಧ

ಬೆಂಗಳೂರು : ಶಾಲೆಯೊಂದರಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಠ್ಯವೊಂದನ್ನು ಅಳವಡಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಪೋಷಕರು ನಮ್ಮ ಮಕ್ಕಳು ತಮನ್ನಾ ಬಗ್ಗೆ ಪಾಠ ಕಲಿಬೇಕಾ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಸಿಂಧಿ ಕಾಲೇಜಿನ ಪಠ್ಯೇತರ ಪಠ್ಯದಲ್ಲಿ ಈ ಪಾಠ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕೆಲವು ಫೋಟೋಗಳು ವೈರಲ್ ಆಗಿದೆ, ಪಾಠದಲ್ಲಿ ತಮನ್ನ ಹುಟ್ಟಿದ್ದು , ಅವರು ನಟಿಸಿದ ಸಿನಿಮಾ ಇವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಿಂಧ್ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು ಅಳವಡಿಸಲಾಗಿದೆ.ಸಿಂಧ್ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಈ ಎಡವಟ್ಟು ಆಗಿದೆ..

ತಮನ್ನಾ ಪಠ್ಯ ಅಳವಡಿಕೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಮಕ್ಕಳು ತಮನ್ನಾ ನೋಡಿ ಕಲಿಬೇಕಾ..? ಇಂತಹ ಪಾಠಗಳು ಏನು ಸಂದೇಶ ಕೊಡುತ್ತದೆ ಎಂದು ಪಾಲಕರು ಕಿಡಿಕಾಡಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...