ಬೆಂಗಳೂರು : ಸ್ನೇಹಿತನ ಖಾಸಗಿ ಅಂಗ (ಗುದದ್ವಾರ) ಕ್ಕೆ ಇನ್ನೋರ್ವ ಸ್ನೇಹಿತ ಗಾಳಿ ಬಿಟ್ಟ ಪರಿಣಾಮ ಯುವಕನ ಕರುಳು ಬ್ಲಾಸ್ಟ್ ಆಗಿ ಆತ ಮೃತಪಟ್ಟ ಘಟನೆ ಬೆಂಗಳೂರಲ್ಲಿ ನಡೆದಿದೆ.
ಮೃತನನ್ನು ಯೋಗಿಶ್ (28) ಎಂದು ಗುರುತಿಸಲಾಗಿದೆ. ಕಳೆದ ಮಾರ್ಚ್ 25ರಂದು ಬೈಕ್ ರಿಪೇರಿಗಾಗಿ ಸಂಪಿಗೆಹಳ್ಳಿಯ ನಿವಾಸಿ ಯೋಗೇಶ್ ಬೈಕ್ ಸರ್ವೀಸ್ ಸೆಂಟರ್ಗೆ ತೆರಳಿದ್ದಾನೆ, ಅಲ್ಲಿ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದನು.ಅಲ್ಲಿ ಗಾಡಿ ಸರ್ವೀಸ್ ಮಾಡಿದ ಬಳಿಕ ಹುಚ್ಚಾಟಕ್ಕೆ ಮುರುಳಿ ಏರ್ ಪ್ರೆಶರ್ ಪೈಪ್ನಿಂದ ಸ್ನೇಹಿತ ಯೋಗೇಶ್ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್ ಆಗಿ ಯುವಕ ಮೃತಪಟ್ಟಿದ್ದಾನೆ.
ಮೊದಲು ಇಬ್ಬರು ತರಲೆ ತಂಟೆ ಮಾಡುತ್ತಿದ್ದರು. ಮುರುಳಿ, ಯೋಗೀಶ್ನ ಮುಖ ಹಾಗೂ ಹೊಟ್ಟೆಗೆ ಮೊದಲು ಗಾಳಿ ಬಿಟ್ಟಿದ್ದನು..ನಂತರ ಹುಚ್ಚಾಟ ಮುಂದುವರೆದು ಯೋಗಿಶ್ ಗುದದ್ವಾರಕ್ಕೆ ಏರ್ ಪ್ಲೇಶರ್ನಿಂದ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಯೋಗೇಶ್ ಕುಸಿದು ನೋವಿನಿಂದ ಕಿರುಚಿ ಕೆಳಗೆ ಬಿದ್ದಿದ್ದಾನೆ, ಕೂಡಲೇ ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, . ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ.