ಬೆಂಗಳೂರು : ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಹಲ್ಲೆಗೊಳಗಾದ ಸಹೋದ್ಯೋಗಿಗಳು ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ, ಅವರು ಹೆಚ್ಚಿನ ಕೆಲಸ ನೀಡಿದ್ದಕ್ಕೆ, ಹೆಚ್ಚಿನ ಒತ್ತಡ ನೀಡಿದ್ದಕ್ಕೆ ಆಡಿಟರ್ ಮೇಲೆ ಸಹೋದ್ಯೋಗಿಗಳು ಹಲ್ಲೆ ನಡೆಸಲು ಗೂಂಡಾಗಳನ್ನು ನೇಮಿಸಿಕೊಂಡಿದ್ದರು.
ಬೆಂಗಳೂರಿನ ಕಲ್ಯಾಣ್ ನಗರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿರುವುದು ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದೆ. ಯಾವುದೇ ಭಯವಿಲ್ಲದೇ ದುಷ್ಕರ್ಮಿಗಳು ಮನಸೋಇಚ್ಚೆ ಹಲ್ಲೆ ನಡೆಸಿದ್ದಾರೆ.