
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 36 ಕೋಟಿ ಮಾದಕ ವಸ್ತುಗಳನ್ನು ಕಸ್ಟಮ್ ಕಮಿಷನರೇಟ್ ನಾಶ ಪಡಿಸಿದೆ. ಬರೀಬ್ಬರಿ 11.997 ಕೆಜಿಗಳಷ್ಟು ಡ್ರಗ್ಸ್ ದಹಿಸಲಾಗಿದೆ.
ಮಾದಕ ವಸ್ತುಗಳ ಕಳ್ಳ ಸಾಗಾಣೆ, ಮಾರಾಟ ವಿರುದ್ಧ ಸಮರದ ಕಾರ್ಯಾಚರಣೆಯಲ್ಲಿ 36 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು ನಾಶಪಡಿಸಲಾಗಿದೆ.
ಮಾದಕ ವಸ್ತು ಕಳ್ಳಸಾಗಾಣೆ ಮತ್ತು ಅದರ ಅಕ್ರಮ ವಿತರಣೆ ತಡೆಗಟ್ಟುವುದಕ್ಕಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ (ಸಿಬಿಐಸಿ) ಆರಂಭಿಸಿದ ಮಾದಕ ದ್ರವ್ಯ ವಿಲೇವಾರಿ ಅಭಿಯಾನದಡಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.