ತನ್ನ ಸ್ನೇಹಿತ ಹಾಗೂ ಆತನ ಭಾವಿ ಪತ್ನಿ ಜೊತೆ ಬ್ಯಾಚುಲರ್ಸ್ ಪಾರ್ಟಿ ಮಾಡುತ್ತಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
ಲಗ್ಗೆರೆ ನಿವಾಸಿ 25 ವರ್ಷದ ಗೌತಮ್ ಮೃತಪಟ್ಟ ಯುವಕನಾಗಿದ್ದು, ಈತ ತನ್ನ ಸ್ನೇಹಿತ ಪ್ರದೀಪ್ ಮನೆಯಲ್ಲಿ ಆತನ ಭಾವಿಪತ್ನಿ ಬಿಂದು ಜೊತೆ ಬುಧವಾರ ರಾತ್ರಿ ಬ್ಯಾಚುಲರ್ ಪಾರ್ಟಿ ಮಾಡಿ ಅಲ್ಲಿಯೇ ತಂಗಿದ್ದ.
ಗುರುವಾರ ಬೆಳಗಿನ ಜಾವ 1.15 ರಿಂದ 1.30 ರ ಸುಮಾರಿಗೆ ಗೌತಮ್ ಅಪಾರ್ಟ್ಮೆಂಟಿನ 5ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇದೀಗ ಗೌತಮ್ ಸಹೋದರ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.