ಬೆಂಗಳೂರು : ಹೊಸೂರು ಬಳಿಯಿರುವ ಕರ್ನೂರು ಚೆಕ್ ಪೋಸ್ಟ್ ನಲ್ಲಿ ದಾಖಲೇ ಇಲ್ಲದೇ ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಹೊಸೂರಿನಿಂದ ಕರ್ನೂರು ಮಾರ್ಗವಾಗಿ ರಾಜೇಂದ್ರನ್ ಎಂಬುವರು ಬೈಕ್ ನಲ್ಲಿ ಹಣ ತರುತ್ತಿದ್ದರು. ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ. 25 ಲಕ್ಷ ಹಣವನ್ನುವಶಕ್ಕೆ ಪಡೆದುಕೊಂಡಿರುವ ಚುನಾವಣಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.