
ಬೆಂಗಳೂರು ನಗರದ ಶಾಲೆಯ 14 ವರ್ಷದ ಬಾಲಕಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.
ದೇವಶ್ರೀ ಅಮರ್ ತೋಕಳೆ ಅವರು ತಮ್ಮ ನಾಲಿಗೆಯಿಂದ ಮೂಗನ್ನು ಹೆಚ್ಚು ಹೊತ್ತು ಮುಟ್ಟಿ ಏಷ್ಯನ್ ದಾಖಲೆ ಬರೆದಿದ್ದಾರೆ.
ದೇವಶ್ರೀ ಅವರ 22 ನಿಮಿಷಗಳ ಸಾಧನೆಯನ್ನು ಏಷ್ಯಾದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಆಕೆಗೆ ‘ಗ್ರ್ಯಾಂಡ್ ಮಾಸ್ಟರ್’ ಪ್ರಮಾಣೀಕರಣವನ್ನು ನೀಡಿದೆ ಮತ್ತು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲೂ ವಿಶ್ವ ದಾಖಲೆ ಹೊಂದಿದ್ದಾರೆ.